Kannada actor Sudeep made a special appearance in Actress Ragini Dwivedi's 'Kichu' Kannada Movie. The movie is directed by Prashanth Raj. <br /> <br /> <br /> ನಟ ಸುದೀಪ್ ಮತ್ತು ರಾಗಿಣಿ ಜೋಡಿ ಕನ್ನಡ ಚಿತ್ರರಂಗದ ಬೆಸ್ಟ್ ಜೋಡಿಗಳಲ್ಲಿ ಒಂದು. ಸುದೀಪ್ ಎತ್ತರಕ್ಕೆ ಸರಿ ಹೊಂದುವ ಸ್ಯಾಂಡಲ್ ವುಡ್ ನಟಿ ಅಂದರೆ ಅದು ರಾಗಿಣಿ. ಮೊದಲು 'ವೀರ ಮದಕರಿ' ಸಿನಿಮಾ ಮಾಡಿ ಗೆದ್ದ ಈ ಜೋಡಿ 'ಕೆಂಪೇಗೌಡ' ಸಿನಿಮಾದಲ್ಲಿಯೂ ಒಟ್ಟಿಗೆ ನಟಿಸಿತ್ತು. ಆದರೆ ಈಗ 'ಕೆಂಪೇಗೌಡ' ಸಿನಿಮಾದ ನಂತರ ಒಂದೇ ಚಿತ್ರದಲ್ಲಿ ಸುದೀಪ್ ಮತ್ತು ರಾಗಿಣಿ ಇಬ್ಬರು ನಟಿಸುತ್ತಿದ್ದಾರೆ. ಆದರೆ ಈ ಇಬ್ಬರು ಜೋಡಿಯಾಗಿ ಚಿತ್ರದಲ್ಲಿ ನಟಿಸುತ್ತಿಲ್ಲ. ರಾಗಿಣಿ ಅವರ ಹೊಸ ಸಿನಿಮಾ 'ಕಿಚ್ಚು' ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರ ಮಾಡಿದ್ದಾರೆ. ಸಿನಿಮಾದಲ್ಲಿ ಡಾಕ್ಟರ್ ಪಾತ್ರವನ್ನು ಸುದೀಪ್ ನಿರ್ವಹಿಸಿದ್ದಾರೆ.ರಾಗಿಣಿ ನಟನೆಯ 'ಕಿಚ್ಚು' ಸಿನಿಮಾ ಶುರುವಾಗಿ ವರ್ಷಗಳೆ ಕಳೆದಿತ್ತು. ಆದರೆ ಆ ಸಿನಿಮಾದ ಸುದ್ದಿ ಇಷ್ಟು ದಿನ ಇರಲಿಲ್ಲ. ಈಗ ಈ ಚಿತ್ರ ಮತ್ತೆ ಸುದ್ದಿ ಮಾಡಿದೆ. ಈ ಸಿನಿಮಾದ ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ.